ಗುರುವಾರ, ಏಪ್ರಿಲ್ 13, 2023

A random conversation with a stranger.



I was waiting in the line for security check at Goa airport. A security fellow

was monitoring the people heading for the security counters,  holding the line

back and allowing movement as and when required. Since some of the ladies'

counters were empty, he called for the ladies waiting in the line to move to the

head of the line and proceed towards the security counters. Some families

took the chance and entire groups rushed forward along with the ladies of the

group. This created some commotion and few people started arguing with the

security fellow. Some others took this opportunity to evade the security fellow

and rush ahead. My wife was already at the security counter and I wanted to

get going too. But a hefty fellow who was before me stood watching the fun

and blocked my way. I had heard him speak kannada with his companion

and hence told him


“ನೀವ್ ಮುಂದೆ ನಡೀರಿ ಸ್ವಾಮಿ ಅವರವರು ಜಗಳ ಆಡ್ಕೋಳಿ”

“ಓ ಹೌದಲ್ವ ಸಾರ್, ಹೋಗೋಣ ನಡೀರಿ. ಬೆಂಗಳೂರು ಫ್ಲೈಟಾ ಸಾರ್?”

“ಹೌದು ಸ್ವಾಮಿ”

“ಬೆಂಗಳೂರಲ್ಲಿ ಎಲ್ಲಿ ಸಾರ್?”

“ಪದ್ಮನಾಭನಗರ”

“ನಮ್ಮ ಏರಿಯಾನೇ! ವೆಕೇಷನ್ಗೆ ಬಂದಿದ್ರಾ ಸಾರ್?”

“ಇಲ್ಲಸ್ವಾಮಿ. ನಾನಿರೋದೇ ಇಲ್ಲಿ. ಕರ್ಮಭೂಮಿ”

“ಓ, ಹೌದಾ ಸಾರ್? ಏನ್ ಮಾಡ್ಕೊಂಡಿದೀರಿ?”

“ಡೆಂಟಿಸ್ಟು ಸ್ವಾಮಿ, ಹಲ್ಲಿನ ಡಾಕ್ಟ್ರು” 

“ದಿನಾ ಬಂದುಹೋಗಿ ಮಾಡ್ತೀರಾ ಸಾರ್?”

“ಇಲ್ಲ ಸ್ವಾಮಿ. ಎರಡು ಮೂರು ತಿಂಗಳಿಗೊಂದು ಸಾರಿ”

“ಇಲ್ಲೇ ಇದ್ದು ಬಿಟ್ಟಿದೀರಾ ಸಾರ್?”

“ಹೌದು ಸ್ವಾಮಿ ನಲವತ್ತು ವರ್ಷದಿಂದ ಇಲ್ಲೇ ಇದೀನಿ” 

“ಒಹೋ, ಬೆಂಗಳೂರಿಗೆ ಯಾಕೆ ಹೋಗ್ತೀರಾ ಸಾರ್?”

“ಹೋಗಬೇಕಾಗತ್ತಲ್ಲ ಸ್ವಾಮೀ, ಹುಟ್ಟಿದೂರು. ಏನಾದ್ರೂ ಒಂದು ಕಾರಣ ಇರತ್ತೆ. ನೀವೇನು ಗೋವಾಗೆ ರಜಕ್ಕೆ ಬಂದಿದ್ರಾ”

“ಏನ್ ರಜಾನೋ ಏನೋ ಬಿಡಿಸಾರ್, ಸುಮ್ನೆ ಈ ಕ್ಯಾಸಿನೋಗೆ ಬರೋದು, ಹೋಗೋದು”

“ಕ್ಯಾಸಿನೋಗಾ? ದುಡ್ಡು ಬಂತಾ, ಹೋಯ್ತಾ?”

“ಬಿಡಿಸಾರ್, ದುಡ್ಡು ಬರತ್ತೆ ಅಂತಾನೇ ಬರೋದು, ಆದ್ರೆ ಯಾವಾಗ್ಲೂ ಕಳಕೊಂಡೇ ಹೋಗೋದು”

“ಈ ಸರ್ತಿ ಎಷ್ಟು ಕಳಕೊಂಡ್ರಿ?”

“ಹೋಯ್ತು ಸಾರ್ ಒಂದು ನಾಕೂವರೆ ಕೋಟಿ”

(My heart jumped towards my mouth - I managed to push it back)

“ಒಂದು ಪೈಸಾನೂ ಬರಲಿಲ್ವಾ?”

“ನೆನ್ನೆ ರಾತ್ರಿ ಒಂದು ಹನ್ನೆರಡು ಲಕ್ಷ ಬಂತು. ಇವತ್ತು ಅದೂ ಹೋಯ್ತು. ಈಗ ಫ್ಲೈಟ್ ಟೈಮ್ಗೆ ಒಂದ್ ಹತ್ತು

ಹದಿನೈದು ಸಾವಿರ ಉಳಿದಿತ್ತು. ಅದನ್ನೂ ಅಲ್ಲೇ ಟಿಪ್ಸ್ ಕೊಟ್ಬಿಟ್ ಬಂದ್ಬಿಟ್ಟೆ”

“ಎಷ್ಟ್ ಸರ್ತಿ ಬಂದಿದೀರಿ ಇಲ್ಲಿಗೆ ?”

“ಯಾರು ಲೆಕ್ಕ ಇಡ್ತಾರೆ ಬಿಡೀ ಸಾರ್. ವಾರ, ಎರಡುವಾರಕ್ಕೆ ಬರ್ತಾನೆ ಇರ್ತೀನಿ.”

“ಯಾವಾಗ್ಲಾದ್ರೂ ದುಡ್ಡು ಬಂದಿದೆಯಾ ?”

“ಹೇಳಿದ್ನಲ್ಲಾ ಸಾರ್. ಪ್ರತಿ ಸರ್ತಿ ಕಳಕೊಂಡೇ ಹೋಗೋದು“

“ಅಲ್ರೀ ದುಡ್ಡು ಕಳೆಯುತ್ತೆ ಅಂತಾ ಗೊತ್ತಿದ್ದೂ ಯಾಕೆ ಬರ್ತೀರಾ?”

“ಅದೇ ಸಾರ್ ಇರೋದು. ಬೇಡಾ ಅಂತಾನೆ ಅನ್ಕೊಂಡಿರ್ತೀನಿ. ಆದ್ರೆ ಹತ್ತು ಹದಿನೈದು ದಿನ ಆಯ್ತು ಅಂದ್ರೆ ಅದೇನೋ ಆಗಿಬಿಡುತ್ತೆ. ಹೋಗಬೇಕು ಹೋಗಬೇಕು ಅನ್ನೋ ಪ್ರೆಶರ್ರು ಸಾರ್” 

“ಏನು ಕೆಲಸ ಮಾಡ್ತೀರಿ?”

“ಸಿವಿಲ್ ಇಂಜಿನೀರು ಸಾರ್”

“ಹೋಗ್ಲಿ ಕಳಕೊಳ್ಳೋಕೆ ಬೇಕಾದಷ್ಟು ಕಾಸು ಕೊಡ್ತಿದಾನಲ್ಲ ದೇವ್ರು, ಕಳೀಲಿ ಬಿಡಿ”

“ಏನ್ ಹೇಳ್ತೀರಾ ಸಾರ್ ಕರ್ಮ. ಕೆಲವು ಸಾರಿ ಫ್ಲೈಟ್ಗೆ ನೇ ಮೂವತ್ತು, ನಲವತ್ತು ಸಾವಿರ ಕೊಟ್ಟಿದೀನಿ.

ಈ ಸರ್ತಿನೇ ಎರಡೂವರೆ ಸಾವಿರಕ್ಕೆ ಸಿಕ್ಕಿದ್ದು. ಆದ್ರೂ ಸೀಟ್ಗೆ ಅಂತ ಮೇಲೆ ನಾಕೂನೂರು ಕಿತ್ಬಿಟ್ರಲ್ಲ ಸಾರ್”

“ಅಲ್ರೀ ಜೂಜಾಡಿ ಕೋಟಿ ಕಳಕೊಂಡೆ ಅಂತೀರಿ, ನಾಕುನೂರ್ಗೆ ಅಳ್ತೀರಲ್ಲ” 

“ಹಂಗಲ್ಲ ಸಾರ್ ಅದು. ಟಿಕೀಟಿನದುಡ್ಡು ಅಂದ್ಮೇಲೆ ಸೀಟಿಗೆ ಆಲ್ವಾ ಸಾರ್ ಅದು? ಅದರಮೇಲೆ ನಾಕುನೂರು

ಅಂದ್ರೆ ಹೇಗೆ ಸಾರ್?”

“ಹೋಗಲಿ ಬಿಡಿ. ಯಾರಿಗೆ ಯಾರಿಂದ ಏನೇನು ಗಿಟ್ಟಬೇಕೋ ಅದು ಗಿಟ್ಟತ್ತೆ. ನಿಮ್ಮಿಂದ ಕ್ಯಾಸಿನೋಗೆ ನಾಲಕ್

ಕೋಟಿ, ಸೀಟಿಗೆ ನಾಕು ನೂರು ಹೋಗಬೇಕಿತ್ತು. ಹೋಯ್ತು ಅಷ್ಟೇ.”

“ಅದ್ಸರಿ ಸಾರ್. ಆದ್ರೆ ಈ ಕ್ಯಾಸಿನೋ ಬ್ಯಾನ್ ಮಾಡ್ಬೇಕು ಸಾರ್. ಅಲ್ಲೀ ತನಕ ನಮಗೆ ಉಳಿಗಾಲ ಇಲ್ಲ”

“ಅಲ್ರೀ ಅವರು ಯಾಕೆ ಬ್ಯಾನ್ ಮಾಡ್ಬೇಕು ? ನೀವು ಬರೋದು ನಿಲ್ಲಿಸಿದರೆ ಆಯ್ತಲ್ಲ?” 

“ಹೌದು ಸಾರ್ ಆದ್ರೆ ಅದು ಹಂಗೆ ಆಗಲ್ಲ. ಅಡಿಕ್ಷನ್ನು ಸಾರ್ ಬಿಡಕ್ಕಾಗಲ್ಲ. ಯಾವ ಫ್ಲೈಟು ಸಾರ್?”

“ಇಂಡಿಗೋ”

“ಓ, ಜಿ ಗೇಟು. ನಮ್ಮದು ಏರ್ ಏಷ್ಯಾ ಸಾರ್ ಜೆ ಗೇಟು. ಬರ್ತೀನಿ ಸಾರ್ ಸಿಗೋಣ ಪದ್ಮನಾಭ ನಗರದಲ್ಲಿ”


saying thus, he moved towards his J gate, taking life as it came to him, in his

stride. He seemed to be a simpleton. He had helped me with my luggage, lifted

the trays from under the conveyor belt for me, helped me push the treys containing

my things on the conveyor belt - out of turn - and then had wished me goodnight.

I liked the fellow. I don't know how he earns his crores which he loses in the casino.

I wonder if he really was telling me the truth? But I have no reason to doubt his

words. Anyway, I will keep an eye open for the fellow when I move around

Padmanabhanagar. It is the first time I met someone who paid forty thousand for

a Bengaluru - Goa ticket (whenever I see those figures in the booking site, I wonder

who pays such insane amounts? - not any more!) and who had a dispensable four

crores! I would certainly like to meet him again and continue the conversation !! 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ