ನಾನು ಓದಿರುವ ಕನ್ನಡ ಬರಹಗಳು ಅನೇಕ. ಆದರೆ ಓದಿದ್ದನ್ನು ಮನದಟ್ಟು ಮಾಡಿಕೊಂಡು ಮನದಲ್ಲಿರಿಸಿಕೊಳ್ಳುವುದು, ಮತ್ತು ಬೇಕೆಂದಾಗ ಅದನ್ನು ಉದಾಹರಿಸುವುದು ನನಗೆ ಸುಲಭವಲ್ಲ. ಯಾವುದೋ ಕಾರಣಗಳಿಂದ ಮನಸ್ಸಿನಲ್ಲಿ ಉಳಿದಿರುವ ತಿಮ್ಮನ ಮಾತುಗಳು, ಕೈಲಾಸಂ ಅವರ ನಾಟಕದ ಸಾಲುಗಳು, ರತ್ನನ ಪದಗಳು, ಹಾಗೆಯೇ ಮತ್ತೆಲ್ಲವನ್ನೂ ಇಲ್ಲಿ ಬರೆದು ಇರಿಸಿಬಿಡುತ್ತೇನೆ. ಅದರಲ್ಲೂ ಸಹ ನೆನಪಿನಲ್ಲಿ ಇರುವುದು ಕೆಲವೇ. ಮನೆಯಲ್ಲಿ ಮಕ್ಕಳಮುಂದೆ ನೂರಾರು ಬಾರಿ ಅವನ್ನು ಹೇಳಿಯಾಗಿದೆ. ನಾನು ಬೀಚಿ ಎನ್ನುತ್ತಲೇ ಅವರು ನನ್ನ ಬಾಯಿ ಮುಚ್ಚಿಸಿ ಅವೆಲ್ಲವನ್ನೂ ತಾವೇ ಹೇಳಿಬಿಡುತ್ತಾರೆ. ಇಲ್ಲಿ ಯಾರೂ ನನ್ನನ್ನು ತಡೆಯುವಹಾಗಿಲ್ಲವಲ್ಲ! ಯಾರಿಗೆ ಏನು ಹಿಡಿಸುವುದೋ ತಿಳಿಯದು. ಹಿಮಾಲಯದ ಶಿಖರವನ್ನೋ ಕೀನ್ಯಾದ ಕಾಡನ್ನೋ, ಬಹುವಾಗಿ ಮೆಚ್ಚಿ, ನನ್ನ ಪತ್ನಿಯನ್ನು ಅಲ್ಲಿ ಕರೆದೊಯ್ದು ಇರಿಸಿದರೆ, "ಇಲ್ಲೇನಿದೆ ಮಣ್ಣು. ಒಂದು ಅಂಗಡಿಯಿಲ್ಲ, ಮುಂಗಟ್ಟು ಇಲ್ಲ" ಎಂದಾಳು! ಸಮಯವಾದಾಗ ಮುಂದಿನ ಮಾತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ