"ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು ಮರೆಯದಿರುಚಿನ್ನ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ"
ಎಂದು ಪ್ರಾರಂಭವಾಗುವ ಕನ್ನಡ ತಾಯಿಯ ಪದ್ಯ "ಕನ್ನಡವ ಕೊಲುವ ಮುನ್ನ ಓ ನನ್ನ ಕೊಲ್ಲು" ಎಂದು ಮುಕ್ತಾಯ ವಾಗುತ್ತದೆ. ನಾನು ಪ್ರೈಮರಿ ತರಗತಿಯಲ್ಲಿದ್ದಾಗ ಓದಿದ್ದ ಪದ್ಯ ಇದು. ಪೂರ್ತಿಸಾಲುಗಳಾಗಲಿ ಕವಿಯ ಹೆಸರಾಗಲೀ ನೆನಪಿಲ್ಲ.
ಕನ್ನಡ ಟಿವಿ ವಾಹಿನಿಗಳಲ್ಲಿ, ಚಲನ ಚಿತ್ರಗಳಲ್ಲಿ ಮತ್ತು ಸಾಪ್ತಾಹಿಕಗಳ ಬರಹಗಳಲ್ಲಿ ಸಹ ಇತ್ತೀಚಿಗೆ ಉಪಯೋಗವಾಗುತ್ತಿರುವ ಕನ್ನಡವನ್ನು ಕಂಡಾಗ ಅವರೆಲ್ಲರ ಕೈಗಳಿಗೂ ಒಂದೊಂದು ಚೂರಿ ಕೊಟ್ಟು, ಮೊದಲು ಕನ್ನಡತಾಯಿಯನ್ನು ಹುಡುಕಿ ಕೊಲೆಮಾಡಿ ಬನ್ನಿರೆಂದು ಹೇಳಿ ಕಳಿಸಬೇಕೆಂದು ಅನಿಸುತ್ತದೆ. ಕನ್ನಡದಲ್ಲಿ ಪಂಡಿತನಲ್ಲದ, ವ್ಯಾಕರಣಬದ್ಧ ಉಪಯೋಗವನ್ನು ಸ್ವಲ್ಪಮಟ್ಟಿಗೆ ಮಾತ್ರ ಬಲ್ಲವನಾದ, ನನಗೇ ಭಾಷೆ ಕೊಲೆಯಾಗುತ್ತಿದೆಯೆಂದು ಅನಿಸುವುದಾದರೆ ಕನ್ನಡವನ್ನು ಶಾಸ್ತ್ರಬದ್ಧವಾಗಿ ಕಲಿತು ಉಪಯೋಗಿಸುವ ಅಭಿಮಾನಿಗಳಿಗೆ ಅದೆಷ್ಟು ಕಸಿವಿಸಿಯಾಗುವುದೋ ತಿಳಿಯದು.
ಅನೇಕ ಹಿರಿಯ ಲೇಖಕರು ನನಗೆಹಿತವೆನ್ನಿಸುವ ಕನ್ನಡವನ್ನು ಬರೆದು ನಮ್ಮ ಮುಂದಿರಿಸಿದ್ದಾರೆ. ನನಗೆ ಮೆಚ್ಚಿಗೆಯಾದ ಸಾಲುಗಳನ್ನು ಈ ಕಾಡು ಹರಟೆಯಲ್ಲಿ ತಂದಿರಿಸುವ ಪ್ರೆಯತ್ನ ಮಾಡುತ್ತೇನೆ. ಈ ಮಾಧ್ಯಮದಲ್ಲಿ ಬರಹವನ್ನು ನನಗೆಬೇಕಾದಂತೆ ಬಗ್ಗಿಸುವುದು ಕಷ್ಟ. ಏನಾಗುತ್ತದೋ ನೋಡೋಣ.
ರಘು, ಈ ಪದ್ಯ ಕುವೆಂಪು ಅವರ ಕೃತಿ. ಅನಿಲ್ ಬರೆದ ಕಾನ್ನಡ ಬ್ಲಾಗ್ ಓದು, ಕನ್ನಡದ ’ಓರಾಟ’ಗಾರರು ಕನ್ನಡಕ್ಕೆ ಮಾಡುತ್ತಿರುವ ಚಿತ್ರಹಿಂಸೆ ಇನ್ನಷ್ಟು ವ್ಯಕ್ತವಾಗುತ್ತದೆ. ನನಗೆ ನಿನ್ನ ಕನ್ನಡ ಬರಹ ಇಷ್ಟ, ಮುಂದುವರಿಸು.
ಪ್ರತ್ಯುತ್ತರಅಳಿಸಿ