ಭಕ್ತಿ ಪ್ರಧಾನವಾದ ದಾಸ ಪಂಥವನ್ನು ಅನುಸರಿಸಿ ದಾಸರು
ಎಂದು ಕರೆಸಿಕೊಳ್ಳುವ ಮಹಾನುಭಾವರು ಅನೇಕರಿದ್ದಾರೆ.
ಎಲ್ಲರಿಗೂ ಬಹಳ ಪರಿಚಿತವಾದ ಪುರಂದರ ದಾಸರು,
ಕನಕದಾಸರಲ್ಲದೆ, ವಿಜಯದಾಸರು, ಜಗನ್ನಾಥದಾಸರು,
ಗೋಪಾಲದಾಸರು, ವೆಂಕಟದಾಸರು ಮುಂತಾದ ಅನೇಕರು
ಗಾನ, ನೃತ್ಯಗಳಿಂದ ಭಗವಂತನನ್ನು ಆರಾಧಿಸಿ, ತಮ್ಮ
ರಚನೆಗಳ ಮೂಲಕ ಭಕ್ತಿರಸವನ್ನು ಉಣಬಡಿಸಿದರು.
ಈ ದಾಸರು ರಚಿಸಿದ ಭಕ್ತಿಗೀತೆಗಳನ್ನು ನಾವು
‘ದಾಸರಪದಗಳು’ ಎಂದೆವು. ಬಹುತೇಕ ದಾಸರಪದಗಳು
ಬಹಳ ಸರಳವಾಗಿದ್ದು ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ.
ಕೆಲವು ಪದಗಳ ಒಟ್ಟು ಭಾವ ತಿಳಿದರೂ ಕೆಲವು ಸಾಲುಗಳ
ಅರ್ಥ ತಿಳಿಯದಂತಾಗಬಹುದು. ಮತ್ತೆ ಕೆಲವು ರಚನೆಗಳ
ತಲೆಬುಡ ತಿಳಿಯದಿರಬಹುದು. ತಿಳಿದವರು ಕೆಲವರು
ತಮಗೆ ತಿಳಿದಂತೆ ಆ ರಚನೆಗಳಿಗೆ ಅರ್ಥ ಬರೆದು
ಸಹಾಯಮಾಡಿದ್ದಾರೆ. ನಮಗೆ ಎಟಕುವಂತಿರುವ ಕೆಲವು
ದಾಸರಪದಗಳ ಗಾಯನ,
ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ
ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ
ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,
ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.
ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು
ತಿಳಿಸಿದರೆ ಹೆಚ್ಚಿನ ಸಂತೋಷ.
sound tools audio joiner
ದಾಸರ ಪದಗಳು ಅಥವಾ ರಚನೆಗಳು ಐದುಸಾವಿರವೆಂದು ಕೆಲವರ ಮತ,
ಐವತ್ತುಸಾವಿರವೆಂದು ಕೆಲವರ ಎಣಿಕೆ, ಐದು ಲಕ್ಷವೆನ್ನುವರು ಮತ್ತೆ ಕೆಲವರು. ಖಚಿತವಾಗಿ
ತಿಳಿಯದು. ಪದಗಳ ಸಾಹಿತ್ಯವೂ ಹಾಗೆಯೇ. ಭಾವ ಹೆಚ್ಚುಕಡಿಮೆ ಒಂದೇ ಇದ್ದರೂ
ಪದಗಳ ಉಪಯೋಗದಲ್ಲಿ ಅಂದರೆ ಬರಹದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ಸಹ ಅನೇಕ
ವತ್ಯಾಸಗಳು ಕಾಣಬರುತ್ತವೆ. ದಾಸರ ಕೆಲವು ಪದಗಳು ಬಹಳ ಸರಳ. ಅದಕ್ಕೆ ಯಾರೂ
ಅರ್ಥ ತಿಳಿಸಬೇಕಿಲ್ಲ. ಕೆಲವು ಪದಗಳ ತಲೆ ಬುಡ ತಿಳಿಯುವುದಿಲ್ಲ. ಅಂಥ ರಚನೆಗಳಿಗೆ
ತಿಳಿದವರು ಕೆಲವರು ನೀಡಿರುವ ಅರ್ಥಗಳು ಕೂಡ ಅನೇಕ. ನಮಗೆ ಎಟಕುವಂತಿರುವ
ಕೆಲವು ದಾಸರಪದಗಳ ಗಾಯನ, ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ ಮಾಡುವುದು
ನಮ್ಮ ಈ ಯು ಟ್ಯೂಬ್ ವಿಡಿಯೋಗಳ ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,
ವಿವರಣೆ ರಘುನಂದನ ಎಂಬ ಹೆಸರಿನ ನನ್ನದು. ತಾವು ಕೇಳಿದರೆ ಸಂತೋಷ, ತಮ್ಮ
ಅನಿಸಿಕೆಯನ್ನು ತಿಳಿಸಿದರೆ ಹೆಚ್ಚಿನ ಸಂತೋಷ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ